ವೈಶಿಷ್ಟ್ಯವಾಗಿರುವುದು
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಪಿಕೆಎಲ್ 2021: ಯು ಮುಂಬಾ ವಿರುದ್ಧ ಮುಗ್ಗರಿಸಿದ ಬೆಂಗಳೂರು ಬುಲ್ಸ್!
ಪ್ರೊ ಕಬಡ್ಡಿ ಲೀಗ್ (ಕೆಪಿಎಲ್) 8ನೇ ಸೀಸನ್ ಆರಂಭವಾಗಿದೆ. ಆರಂಭಿಕ
ಪಂದ್ಯದಲ್ಲೇ 2018ರ ಸೀಸನ್ ನ ಚಾಂಪಿಯನ್ಸ್ ಬೆಂಗಳೂರು ಬುಲ್ಸ್ ತಂಡ ಹಿನ್ನಡೆ ಅನುಭವಿಸಿದೆ. ಬುಧವಾರ
(ಡಿಸೆಂಬರ್ 22) ನಡೆದ ಉದ್ಘಾಟನಾ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ವಿರುದ್ಧ ಯು ಮುಂಬಾ 46-30 ಅಂತರದ
ಗೆಲುವು ದಾಖಲಿಸಿದೆ.
ಯು ಮುಂಬಾ ಪ್ರಮುಖ ಆಟಗಾರ ಅಭಿಷೇಕ್ ಸಿಂಗ್ ಅದ್ಭುತ ರೈಡ್ ಪಾಯಿಂಟ್ಸ್
ನಿಂದ ತಂಡ ಬಹಳ ಅಂತರದಿಂದ ಗೆಲುವು ಕಂಡಿದೆ. 15 ರೈಡ್, 4 ಬೋನಸ್ ಸೇರಿ ಸಿಂಗ್ ಒಬ್ಬರೇ ತಂಡಕ್ಕೆ
19 ಪಾಯಿಂಟ್ಸ್ ಗಳ ಕೊಡುಗೆ ನೀಡಿದರು. ಸಿಂಗ್ ಬಿಟ್ಟರೆ ಬಿ ಅಜಿತ್ ಕುಮಾರ್ 6, ಹರೇಂದ್ರ ಕುಮಾರ್
4, ಆಶಿಷ್ ಕುಮಾರ್ 3, ಮೋಹ್ಸೇನ್ ಮಗ್ಸೌಡ್ಲೌ 2, ರಿಂಕು ಎಚ್.ಸಿ. 2, ಫಝಲ್ ಅತ್ರಾಚಲಿ 2 ಮತ್ತು
ರಾಹುಲ್ ಸೇತ್ಪಾಲ್ 1 ಅಂಕ ಸೇರಿಸಿ ತಂಡದ ಜಯಕ್ಕೆ ಕಾರಣರಾದರು.
ಬೆಂಗಳೂರು ಬುಲ್ಸ್ ನಿಂದ ಸ್ಟಾರ್ ಆಟಗಾರ ಪವನ್ ಕುಮಾರ್ ಶೆಹ್ರಾವತ್
ಈ ಬಾರಿ ಅಷ್ಟೇನೂ ಗಮನ ಸೆಳೆಯಲಿಲ್ಲ. ಚಂದ್ರನ್ ರಂಜಿತ್ ಜೊತೆ ಪವನ್ ಕೂಡ ತಂಡದ ಪರ ಸ್ವಲ್ಪ ಮಟ್ಟಿನ
ಕೊಸರಾಟ ನಡೆಸಿದರಾದರೂ ತಂಡವನ್ನು ಗೆಲುವಿನ ದಡ ದಾಟಿಸಲು ಇಬ್ಬರಿಂದಲೂ ಆಗಲಿಲ್ಲ. ಚಂದ್ರನ್ ರಂಜಿತ್
13, ಪವನ್ ಕುಮಾರ್ 12, ಮಯೂರ್ ಕದಮ್ 2, ಭರತ್ 2, ಮೋರ್ ಜಿಬಿ 1 ಅಂಕ ಸೇರಿಸಿ ಬುಲ್ಸ್ ಸೋಲಿನ ಅಂತರ
ಕಡಿಮೆ ಮಾಡಿಕೊಂಡರು.
ಪಂದ್ಯದ ಆರಂಭದಲ್ಲಿ ಬೆಂಗಳೂರು ಮುನ್ನಡೆಯೊಂದಿಗೆ ಕೊಂಚ ಹುರುಪಿನ
ಆಟ ನೀಡಿತ್ತು. ಆದರೆ ಪಂದ್ಯದ ಫಸ್ಟ್ ಹಾಫ್ ವೇಳೆ ಮುಂಬೈ ಉತ್ತಮ ಲೀಡ್ ಪಡೆದುಕೊಂಡಿತ್ತು. ಕೊನೇ ಕ್ಷಣದಲ್ಲಿ
ಬೆಂಗಳೂರು ಪೈಪೋಟಿ ನೀಡುವ ಪ್ರಯತ್ನ ಮಾಡಿತಾದರೂ ಎದುರಾಳಿ ಮುಂಬೈ ತಂಡ ಬೆಂಗಳೂರನ್ನು ಆಲ್ ಔಟ್ ಮೂಲಕ
ಸೋಲಿನಂಚಿಗೆ ತಳ್ಳಿತು. ಡಿಸೆಂಬರ್ 24ಕ್ಕೆ ಮತ್ತೆ ಬೆಂಗಳೂರು ಬುಲ್ಸ್ ಮತ್ತು ತಮಿಳು ತಲೈವಾಸ್ ತಂಡಗಳು
ಮುಖಾಮುಖಿಯಾಗಲಿವೆ.
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಕಾಮೆಂಟ್ಗಳು
ಪ್ರಚಲಿತ ಪೋಸ್ಟ್ಗಳು
ನಿಸರ್ಗವೇ ಬಿಡಿಸೋ ಅಚ್ಚರಿಯ ಶಿಲ್ಪ ಈ ಸ್ಟಾಲಕ್ಟೈಟ್, ಸ್ಟಾಲಗ್ಮೈಟ್!
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಮನುಷ್ಯರ ಮುಖ ಹೋಲೋ ಈ ಮೀನಿನ ಹೆಸರು ಬ್ಲಾಬ್ಫಿಶ್ (ಈ ಜಗ-ಸೋಜಿಗ!)
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
😱
ಪ್ರತ್ಯುತ್ತರಅಳಿಸಿ